ಭಾರತವು 1947ರಲ್ಲಿ ಸ್ವತಂತ್ರ ರಾಷ್ಟ್ರವಾದ ನಂತರ ಅದರ ನೆರೆಹೊರೆಯ ಸಾರ್ವಭೌಮ ರಾಷ್ಟ್ರಗಳಾದ ಅಫ್ಘಾನಿಸ್ತಾನ್, ಬಾಂಗ್ಲಾದೇಶ, ಭೂತಾನ್, ಚೀನಾ, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನಗಳೊಂದಿಗೆ ಅಂತರರಾಷ್ಟ್ರೀಯ ಭೂ ಗಡಿಗಳನ್ನು ಹೊಂದಿದೆ. ಕಾಶ್ಮೀರ ವಿವಾದದ ಪರಿಣಾಮ ಪಾಕಿಸ್ತಾನದೊಂದಿಗೆ ಗಡಿ ನಿಯಂತ್ರಣ ನಿಯಂತ್ರಣ (ಎಲ್‌ಒಸಿ) ರೇಖೆಯನ್ನು ಹೊಂದಿದೆ. ಈ ಎಲ್ಲಾ ಗಡಿ ಮತ್ತು ನಿಯಂತ್ರಣ (ಎಲ್‌ಒಸಿ) ರೇಖೆಯ ರಕ್ಷಣೆಯ ಹೊಣೆಯನ್ನೂ ಹೊಂದಿದೆ. ಅದಲ್ಲದೆ ಭಾರತವು ಏಳು ದೇಶಗಳಾದ ಕಡಲ ಗಡಿ- ಬಾಂಗ್ಲಾದೇಶ; ಇಂಡೋನೇಷ್ಯಾ ಮ್ಯಾನ್ಮಾರ್; ಪಾಕಿಸ್ತಾನ; ಥೈಲ್ಯಾಂಡ್; ಶ್ರೀಲಂಕಾ; ಮಾಲ್ಡೀವ್ಸ್, ಇವುಗಳೊಂದಿಗೆ ಕಡಲ ಗಡಿ ಪ್ರದೇಆಶವನ್ನೂ ಹೊಂದಿದೆ
# ರಾಡ್ ಕ್ಲಿಫ್ ಗಡಿರೇಖೆ:- ಭಾರತ ಮತ್ತು ಪಾಕಿಸ್ತಾನ (3323 kms)
# ಮ್ಯಾಕ್ ಮೋಹನ್ ಗಡಿರೇಖೆ:- ಭಾರತ ಮತ್ತು ಚೀನಾ
# ಡ್ಯುರಾಂಡ್ ರೇಖೆ:- ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನ106 kms
# ಮ್ಯಾಗ್ನಿಕೋಟ್ ಗಡಿರೇಖೆ (ರಕ್ಷಣಾ ಪಂಕ್ತಿ):- ಫ್ರಾನ್ಸ್ ಮತ್ತು ಜರ್ಮನಿ
#38 ನೇ ಸಮಾಂತರ (ಪ್ಯಾರಾಲಲ್):-ಉತ್ತರ ಮತ್ತು ದಕ್ಷಿಣ ಕೊರಿಯಾ
#17 ಸಮಾನಾಂತರ (ಪ್ಯಾರಾಲಲ್):-ಉತ್ತರ ಮತ್ತು ದಕ್ಷಿಣ ವಿಯೆಟ್ನಾಂ
#49 ನೇ ಸಮಾನಾಂತರ (ಪ್ಯಾರಾಲಲ್):-ಅಮೇರಿಕಾ ಮತ್ತು ಕೆನಡಾ
# ಹಿಂಡೆನ್ ಬರ್ಗ್ ರೇಖೆ:- ಜರ್ಮನಿ ಮತ್ತು ಪೋಲೆಂಡ್
# ಓಡೆರ್ ನೀಸ್ ರೇಖೆ:- ಪೂರ್ವ ಜರ್ಮನಿ ಮತ್ತು ಪೋಲೆಂಡ್
# ಸಿಗ್ ಫ್ರೈಡ್ ರೇಖೆ:-ಜರ್ಮನಿ ಮತ್ತು ಫ್ರಾನ್ಸ್.
#24 ನೇ ಸಮಾನಾಂತರ (ಪ್ಯಾರಾಲಲ್):- ಭಾರತ ಮತ್ತು ಮಯನ್ಮಾರ್ .
# ಭಾರತ ಮತ್ತು ಪಾಕಿಸ್ತಾನ:
ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 3310 ಕಿ.ಮೀ.
ಪಾಕಿಸ್ಥಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು : ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಕಾಶ್ಮೀರ.
ಪಾಕಿಸ್ಥಾನದೊಂದಿಗಿನ ವಿವಾದಿತ ಪ್ರದೇಶಗಳು : ಗುಜರಾತಿನ ಕಛ್ ಜೌಗು ವಲಯ, ಸರ್ ಕ್ರಿಕ್ ಪ್ರದೇಶ, ಕಾಶ್ಮೀರ ಕಣಿವೆ, ಹುಂಜ-ಗಿಲ್ಗಿಟ್.
# ಭಾರತ ಮತ್ತು ಚೀನಾ:
ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 3917 ಕಿ.ಮೀ.
ಚೀನಾದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು: ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ, ಅರುಣಾಚಲ ಪ್ರದೇಶ. ಚೀನಾದೊಂದಿಗಿನ ವಿವಾದಿತ ಪ್ರದೇಶಗಳು: ಆಕ್ ಸಾಯ್ ಚಿನ್ (ಕಾಶ್ಮೀರದ ಪೂರ್ವ ಭಾಗ), ಅರುಣಾಚಲ ಪ್ರದೇಶ, ನತುಲಾ.
# ಭಾರತ ಮತ್ತು ಅಫಘಾನಿಸ್ತಾನ:
ಅಂತರ್ರಾಷ್ಟ್ರೀಯ ಗಡಿರೇಖೆ: ಡ್ಯೂರಾಂಡ್ ರೇಖೆ.
ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 80 ಕಿ.ಮೀ.
ಅಫಘಾನಿಸ್ತಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು: ಜಮ್ಮು ಕಾಶ್ಮೀರ.
# ಭಾರತ ಮತ್ತು ನೇಪಾಳ:
ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 1752 ಕಿ.ಮೀ.
ನೇಪಾಳದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು: ಉತ್ತರಾಖಂಡ, ಬಿಹಾರ, ಉತ್ತರ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ.
ನೇಪಾಳದೊಂದಿಗಿನ ವಿವಾದಿತ ಪ್ರದೇಶಗಳು: ಕಪಾಲಿನಿ, ಸುಸ್ತಾ.
# ಭಾರತ ಮತ್ತು ಭೂತಾನ್:
ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 587 ಕಿ.ಮೀ.
ಭೂತಾನ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು: ಸಿಕ್ಕಿಂ, ಆಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ.
# ಭಾರತ ಮತ್ತು ಮಯನ್ಮಾರ್:
ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 1536 ಕಿ.ಮೀ.
ಮಯನ್ಮಾರ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು: ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ.
# ಭಾರತ ಮತ್ತು ಬಾಂಗ್ಲಾದೇಶ:
ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 4096 ಕಿ.ಮೀ.
ಇದು ಭಾರತ ದೇಶ ಹೊಂದಿರುವ ಅತಿ ಉದ್ದವಾದ ಅಂತರ್ರಾಷ್ಟ್ರೀಯ ಗಡಿರೇಖೆಯಾಗಿದೆ.
ಬಾಂಗ್ಲಾದೇಶದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು: ಆಸ್ಸಾಂ, ತ್ರಿಪುರಾ, ಮೇಘಾಲಯ, ಮಿಜೋರಾಂ, ಪಶ್ಚಿಮ ಬಂಗಾಳ.
ಬಾಂಗ್ಲಾದೇಶದೊಂದಿಗಿನ ವಿವಾದಿತ ಪ್ರದೇಶಗಳು:ಪರಕ್ಕಾ ಆಣೆಕಟ್ಟು, ಚಕ್ಮಾ ನಿರಾಶ್ರಿತರು, ನ್ಯೂಮರ್ ದ್ವೀಪ, ತಿನ್ಬಿಕ್ ಪ್ರದೇಶ.
ಕೃಪೆ: ಎಕ್ಸಾಮ್ ಪ್ಲ್ಯಾನಿಂಗ್ ಆನ್ ಲೈನ್.
# ಭಾರತದ ಕಡಲ ಗಡಿಗಳು :
ಭಾರತದ ಕಡಲ ಗಡಿಗಳು ಸಮುದ್ರ ಕಾನೂನಿನ ಕುರಿತ ವಿಶ್ವಸಂಸ್ಥೆಯ ಸಮಾವೇಶದಿಂದ ಗುರುತಿಸಲ್ಪಟ್ಟ ಕಡಲ ಗಡಿಯಾಗಿದ್ದು, ಪ್ರಾದೇಶಿಕ ನೀರು, ಸಮೀಪ ವಲಯಗಳು ಮತ್ತು ವಿಶೇಷ ಆರ್ಥಿಕ ವಲಯಗಳ ಗಡಿಗಳನ್ನು ಒಳಗೊಂಡಿರುತ್ತದೆ. 12 ನಾಟಿಕಲ್-ಮೈಲಿ (22 ಕಿಮೀ; 14 ಮೈಲಿ) ಪ್ರಾದೇಶಿಕ ಕಡಲ ವಲಯ ಮತ್ತು 200-ನಾಟಿಕಲ್-ಮೈಲಿ (370 ಕಿಮೀ; 230 ಮೈಲಿ) ವಿಶೇಷ ಆರ್ಥಿಕ ವಲಯವನ್ನು ಹೊಂದಿರುವ ಭಾರತವು 7,000 ಕಿಲೋಮೀಟರ್ (4,300 ಮೈಲಿ) ಗಿಂತ ಹೆಚ್ಚು ಕಡಲ ಗಡಿಯನ್ನು ಹೊಂದಿದ್ದು, ಏಳು ರಾಷ್ಟ್ರಗಳೊಂದಿಗೆ ಗಡಿಗಳನ್ನು ಹಂಚಿಕೊಂಡಿದೆ.