1.ಪ್ರಾಣಿಗಳು ಒಂದನ್ನೊಂದು ಸಂಪರ್ಕಿಸಬಲ್ಲವು ಎಂದರೆ ಕೆಲವು ವಿಷಯಗಳನ್ನು ಸಂಜ್ಞೆಗಳು ಮತ್ತು ಸಂಕೇತಗಳಿಂದ ಕೊಡಬಲಲವು ಎಂದು ನಾವು ಅರ್ಥಮಾಡಿಕೊಂಡರೆ ಹೌದು ಎಂದೇ ಹೇಳಬೇಕಾಗುತ್ತದೆ. ನಾವು ಮಾತಾಡುವಂತೆ ಅವುಗಳೂ ಆಡಬಲ್ಲವೆ ಎಂದರೆ ಅದಕ್ಕೆ ಉತ್ತರ ಇಲ್ಲ.
2.ತಾಯಿಕೋಳಿಯು ದೊಡ್ಡಕೂಗನ್ನು ಕೂಗಿದರೆ ಅಥವಾ ನೆಲಕ್ಕೆ ಬಗ್ಗಿದರೆ, ಆಗ ಅದರ ಎಲ್ಲ ಮರಿಗಳು ಇದು ಅಪಾಯದ ಎಚ್ಚರಿಕೆ ಎಂದು ತಿಳಿದುಕೊಳ್ಳುತ್ತದೆ. ಕೆಲವು ಪ್ರಾಣಿಗಳು, ಇತರ ಪ್ರಾಣಿಗಳು ಕೊಡುವ ಅತಿ ಸೂಕ್ಷ್ಮ ಸಂಕೇತಗಳನ್ನು ಅನುಸರಿಸಬಲ್ಲವು. ಸುತ್ತಮುತ್ತ ನೋಡುವುದಕ್ಕೆ ಪಕ್ಷಿಯು ಒಂದು ನಿರ್ದಿಷ್ಟ ರೀತಿಯಲ್ಲಿ ಹಾರಿದರೆ, ಆಗ ಅವುಗಳು ಹಾರಿಹೋಗಬೇಕೆಂದು ತಿಳಿದುಕೊಂಡು ಹಾಗೆಯೇ ಮಾಡುತ್ತವೆ.
3.ಪ್ರಾಣಿಗಳು ಅನೇಕ ರೀತಿಯಲ್ಲಿ ಸಂಪರ್ಕಿಸುತ್ತವೆ. ಅವುಗಳಲ್ಲಿ ವಾಸನೆಯ ಮೂಲಕವಾಗಿರುವುದು ಒಂದು ಗುಂಪುಗಳಲ್ಲಿ ವಾಸಿಸುವ ಹೆಚ್ಚಿನ ಪ್ರಾಣಿಗಳು, ಒಟ್ಟಿಗೆ ಇರಲು ವಾಸನೆಯನ್ನು ಅವಲಂಬಿಸುತ್ತದೆ. ನಾಯಿಗಳು ವಾಸನೆಯಿಂದ ಒಂದನ್ನೊಂದು ಗುರುತಿಸುತ್ತದೆ ಎಂದು ನಮಗೆ ಗೊತ್ತು.
ಶಿಕ್ಷಣಕ್ಕೆ ಸಂಬಂಧಿಸಿದ ದೇಶದ ಪ್ರಮುಖ ಆಯೋಗ ಮತ್ತು ಸಮಿತಿಗಳು
4.ವಾನರಗಳು ಮತ್ತು ಇತರ ಪ್ರಾಣಿಗಳು ಸಹಜ ಪ್ರವೃತ್ತಿಯಿಂದ ತಮ್ಮ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತವೆ. ಇದಕ್ಕೆ ಮುಂಚೆ ಇನ್ನೊಂದು ಪ್ರಾಣಿಗಳನ್ನು ಯಾವಾಗಲು ನೋಡದಿದ್ದರೂ ಸರಿಯಾದ ರೀತಿಯ ಶಬ್ದಗಳು ಮತ್ತು ಭಾವಗಳನ್ನು ತೋರಿಸುತ್ತದೆ.