ಎಫ್‌ಡಿಎ ಪರೀಕ್ಷೆ ಎದುರಿಸುವವರಿಗೆ ಇಲ್ಲಿದೆ 3 ಮಹತ್ವದ ಅಪ್ಡೇಟ್ಸ್

ಎಫ್‌ಡಿಎ ಪರೀಕ್ಷೆ ಎದುರಿಸುವವರಿಗೆ ಇಲ್ಲಿದೆ 3 ಮಹತ್ವದ ಅಪ್ಡೇಟ್ಸ್

ಕರ್ನಾಟಕ ಲೋಕಸೇವಾ ಆಯೋಗವು ಜನವರಿ 23 ಮತ್ತು 24, 2021 ರಂದು ನಿಗದಿಪಡಿಸಿರುವ ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ, ಅಭ್ಯರ್ಥಿಗಳು ಪ್ರವೇಶ ಪತ್ರ ಅಪ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು.

# ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ.. ?
ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಲು ಕೆಪಿಎಸ್‌ಸಿ ವೆಬ್‌ಸೈಟ್ www.kpsc.kar.nic.in ‌ ಗೆ ಭೇಟಿ ನೀಡಿ. – ಓಪನ್‌ ಆದ ಪೇಜ್‌ನಲ್ಲಿ ‘ Click here to download admission ticket for FDA 2019 Examination’ ಎಂದಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಕೆಪಿಎಸ್‌ಸಿಯ ಮತ್ತೊಂದು ಪೇಜ್‌ ಓಪನ್‌ ಆಗುತ್ತದೆ. ಈ ಪೇಜ್‌ನಲ್ಲಿ ಅಭ್ಯರ್ಥಿಗಳು ಲಾಗಿನ್ ಡೀಟೇಲ್ಸ್‌ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ಅನ್ನು ಎಂಟರ್ ಮಾಡಿ ಲಾಗಿನ್ ಆಗಿ. ನಂತರ ಪ್ರವೇಶ ಪತ್ರ ಪ್ರದರ್ಶನವಾಗುತ್ತದೆ. ಡೌನ್‌ಲೋಡ್‌ ಮಾಡಿಕೊಳ್ಳಿ ಅಥವಾ ನೇರವಾಗಿ ಪ್ರಿಂಟ್ ತೆಗೆದುಕೊಳ್ಳಿ.

# ಎಫ್‌ಡಿಎ ನೇಮಕಾತಿಗೆ ಹೆಚ್ಚುವರಿ ಹುದ್ದೆಗಳ ಸೇರ್ಪಡೆ :
ಲೋಕಸೇವಾ ಆಯೋಗವು 2019-20ನೇ ಸಾಲಿನ ಸಹಾಯಕ / ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಹುದ್ದೆಗಳನ್ನು ಸೇರ್ಪಡೆ ಮಾಡಿ ಪ್ರಕಟಣೆ ಹೊರಡಿಸಿದೆ. ಖಾಲಿ ಇರುವ ಉಳಿಕೆ ಮೂಲ ವೃಂದದ 998 ಮತ್ತು ಹೈದೆರಾಬಾದ್ ಕರ್ನಾಟಕ ವೃಂದದ 138 (ಸೇರ್ಪಡೆ 24 ಹುದ್ದೆಗಳು 23+01 ಹೈ.ಕ) ಹುದ್ದೆಗಳ ಸಂಖ್ಯೆಯು ಬದಲಾವಣೆಗೆ ಒಳಪಟ್ಟಿರುತ್ತದೆ ಎಂದು ಕೆಪಿಎಸ್‌ಸಿಯು ಪ್ರಕಟಣೆ ಮೂಲಕ ತಿಳಿಸಿದೆ.

[ Read this also :  ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 6 ]

ಕರ್ನಾಟಕ ಸರ್ಕಾರದ ಸಚಿವಾಲಯ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಗಳಲ್ಲಿ ಖಾಲಿ ಇರುವ ಹೆಚ್ಚುವರಿ ಎಫ್‌ಡಿಎ ಹುದ್ದೆಗಳ ನೇರ ನೇಮಕಾತಿಗೆ ಬೇಡಿಕೆ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಉಳಿಕೆ ಮೂಲ ವೃಂದದ 10 ಮತ್ತು ಹೈದೆರಾಬಾದ್ ಕರ್ನಾಟಕ ವೃಂದದ 15 ಹುದ್ದೆಗಳ ನ್ನು ದಿನಾಂಕ 31-01-2020 ರ ಅಧಿಸೂಚನೆಯಲ್ಲಿ ಸೇರ್ಪಡೆ ಮಾಡಲಾಗಿತ್ತು.

ಅರ್ಜಿ ಸ್ವೀಕರಿಸುವ ಸಮಯದಲ್ಲೇ ಇಲಾಖಾ ಆಧ್ಯತೆಯನ್ನು ಸಹ ಪಡೆಯಲಾಗಿತ್ತು. ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ಸಂಬಂಧಿತ ನೇಮಕಾತಿ ಪ್ರಾಧಿಕಾರಗಳು ದೃಢೀಕರಿಸಿ ಸಲ್ಲಿಸಿರುವ ವರ್ಗೀಕರಣದ ಮೇರೆಗೆ, ಸದರಿ ಹೆಚ್ಚುವರಿ ಹುದ್ದೆಗಳನ್ನು ಮುಖ್ಯ ಅಧಿಸೂಚನೆಗಳಿಗೆ ಸೇರ್ಪಡೆಗೊಳಿಸಿ, 02ನೇ ಸೇರ್ಪಡೆ ಅಧಿಸೂಚನೆಯನ್ನು ಪ್ರಕಟಿಸಿದೆ.

 

# ಪರೀಕ್ಷಾ ಕೇಂದ್ರಕ್ಕೂ ತೆರಳುವ ಎಚ್ಚರ :
ಪ್ರಥಮ ದರ್ಜೆ ಸಹಾಯಕ ಪರೀಕ್ಷೆಯನ್ನು ಯಾವುದೇ ಲೋಪದೋಷಗಳಾಗದಂತೆ ಎಚ್ಚರವಹಿಸಿ ನಡೆಯಲು ಕರ್ನಾಟಕ ಲೋಕಸೇವಾ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಎಫ್‌ಡಿಎ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣ ಹಾಗೂ ಯಾವುದೇ ಚೀಟಿಗಳನ್ನು ತರದಂತೆ ಎಚ್ಚರ ವಹಿಸುವುದು ಅನಿವಾರ್ಯ.

ಕೆಮ್ಮು, ಜ್ವರ, ಶೀತ ಹಾಗೂ ಕೋವಿಡ್ ಲಕ್ಷಣ ಇರುವ ವಿದ್ಯಾರ್ಥಿಗಳನ್ನ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುತ್ತಿದ್ದು ಮೇಲ್ವಿಚಾರಕರಾಗಲಿ, ವಿದ್ಯಾರ್ಥಿಗಳಗಾಲಿ ಮೊಬೈಲ್‌ಗಳನ್ನು ಪರೀಕ್ಷಾ ಕೊಠಡಿಯೊಳಗೆ ತರಕೂಡದು. ವಿದ್ಯಾರ್ಥಿಗಳು ಅವರೇ ಮಾಸ್ಕ್, ಸ್ಯಾನಿಟೈಸರ್, ನೀರಿನ ಬಾಟಲಿ ತರಲು ಅವಕಾಶವಿದೆ ಹಾಗೂ ಪರೀಕ್ಷಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆಯೋಗ ಸೂಚನೆ ನೀಡಿದೆ.

.